ಮರ ಬೆಳಸಿ, ಊರು ಉಳಿಸಿ

ಬಿಸಿಲು ಬಿಸಿಲು ಬಿಸಿಲು ಎಲ್ಲಿ ನೋಡಿದರೂ ಬರ್ರಿ ಬಿಸಿಲು! ಹಿಂಗಂತ ಶಮನೇವಾಡಿ - ಬೇಡಕಿಹಾಳ ಪರಿಸರದ ಜನಾ ಅಂತಿದ್ದಾರೆ ನೋಡ್ರಿ!! ಶಮನೇವಾಡಿಯಿಂದ ಬೇಡಕಿಹಾಳದವರೆಗೆ ಹುಡುಕಿದ್ರ ಒಂದ ಗಿಡ ಮರ ಸಿಗಲ್ಲ ನೋಡ್ರಿ!!!

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 126ನೇ ಜನ್ಮ ದಿನಾಚಾರಣೆ

ಇಂದು  ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 126ನೇ ಜನ್ಮ ದಿನಾಚಾರಣೆ  ಹಿನ್ನೆಲೆ, ನೇಜ ಜಿಲ್ಲಾ ಪಂಚಾಯಿತಿ ಸದಸ್ಯ ಸುದರ್ಶನ ಖೋತ ಅವರು ಬೇಡಕಿಹಾಳ ಸರ್ಕಲ್ ದಲ್ಲಿರುವ ಡಾ.ಬಿ.ಆರ್ ಅಂಬೆಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಶಮನೇವಾಡಿ ಬೇಡಕಿಹಾಳ ಗ್ರಾಮಸ್ಥರು ಹಾಗೂ ಪಂಚಾಯ್ತಿ ಸದಸ್ಯರು ಉಪಸ್ಥಿತರಿದ್ದರು.

ಶಮನೇವಾಡಿ: ದೂಧಗಂಗಾ ಸೇತುವೆಗೆ 57 ವರ್ಷ

ಲಕ್ಷಾಂತರ ಜನರ ಸಂಚಾರಕ್ಕೆ ಸಂಪರ್ಕಕೊಂಡಿಯಾಗಿರುವ ಬೇಡಕಿಹಾಳ ಇಚಲಕರಂಜಿ ಮಾರ್ಗ ಮಧ್ಯೆದ ದೂಧಗಂಗಾ ಸೇತುವೆ ಐದು ದಶಕ ದಾಟಿದರೂ ಅಲುಗಾಡುವುದಿಲ್ಲ. ಐದು ದಶಕಗಳ ಹಿಂದೆ ಗುಣಮಟ್ಟದಿಂದ ನಿರ್ಮಿಸಿದ ಈ ಸೇತುವೆ ಇಂದಿಗೂ ಗಟ್ಟಿಯಾಗಿದ್ದು ಅತಿ ಭಾರದ ವಾಹನಗಳು ಸಂಚರಿಸಿದರೂ ಕಿಂಚಿತ್ತೂ ಅಲುಗಾಡುವುದಿಲ್ಲ.  ದಿನನಿತ್ಯ 300ಕ್ಕೂ ಅಧಿಕ ಬಸ್‌ಗಳು ಲಾರಿ, ಟೆಂಪೋ ಸೇರಿ ಸಾವಿರಾರು ವಾಹನಗಳು ಈ ಸೇತುವೆ ಮೇಲಿಂದ ಸಂಚರಿಸುತ್ತಿವೆ. ಈ ಸೇತುವೆಯನ್ನು ದೂಧಗಂಗಾ ನದಿಗೆ ಅಡ್ಡಲಾಗಿ 1960 ರಲ್ಲಿ ಕಟ್ಟಲಾಗಿದೆ. ಸ್ವಾತಂತ್ರ್ಯ ನಂತರ ವಿಧಾನಸಭೆಯ ಸದಸ್ಯ ಶಿದಗೌಡಾ ಶಿವಗೌಡಾ … Continue reading ಶಮನೇವಾಡಿ: ದೂಧಗಂಗಾ ಸೇತುವೆಗೆ 57 ವರ್ಷ

ಬೇಡಕಿಹಾಳ ಗ್ರಾಮದಲ್ಲಿ ಕಾಯಕಲ್ಪ

ಬೇಡಕಿಹಾಳ ಗ್ರಾಮದಲ್ಲಿ ಕಾಯಕಲ್ಪ (ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ವಚ್ಚತೆ) ಎಂಬ ಕಾರ್ಯಕ್ರಮವನ್ನು ಜಿ. ಪಂ. ಸದಸ್ಯ ಶ್ರೀ ಸುದರ್ಶನ ಖೋತ ನೇತ್ರತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮಧ್ಯದ ಅಂಗಡಿ ಬಂದ ಮಾಡಲು ಮನವಿ

ಬೇಡಕಿಹಾಳ ಮತ್ತು ಶಮನೇವಾಡಿ ಗ್ರಾಮದ ಮಹಿಳೆಯರು ಎರಡೂ ಊರುಗಳಲ್ಲಿ ಇರುವ ಮಧ್ಯದ ಅಂಗಡಿ ಮುಚ್ಚುವ ಸಲುವಾಗಿ ಪ್ರತ್ಯೇಕವಾಗಿ ಎರಡೂ ಗ್ರಾಮದ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ಇದೆ ವೇಳೆ ಕೆಲ ಹೊತ್ತು ಸರ್ಕಲ್ ನಲ್ಲಿ ಪ್ರತಿಭಟನೆ ಮಾಡಿ ರಸ್ತೆ ಬಂದ್ ಮಾಡಿ ಗಮನ ಸೆಳೆದರು. ಶಮನೇವಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀ ದೀಪಕ್ ಖೋತ ಅವರು ಅಲ್ಲಿ ನೆರೆದಿದ್ದ ಜನರಿಗೆ ಮಧ್ಯದ ಅಂಗಡಿಗಳನ್ನು ಮುಚ್ಚಿಸುವ ಸಲುವಾಗಿ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಮತ್ತೆ ದೂಧಗಂಗಾ ನದಿಗೆ ಪ್ರವಾಹ

ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮತ್ತೆ ದೂಧಗಂಗಾ ನದಿ ತುಂಬಿ ಹರಿಯುತ್ತಿದ್ದು, ರೈತರ ಹೊಲಗಳಲ್ಲಿ ನೀರು ತುಂಬಿದೆ... ಕಳೆದ ಜುಲೈ 13 ರಂದು ಮಹಾಪೂರ ಬಂದಿತ್ತು, ಈಗ ಮತ್ತೆ ದೂಧಗಂಗಾ, ವೇದಗಂಗಾ ಜಲಾಯನ ಪ್ರದೇಶಗಳಲ್ಲಿ ಭಾರಿ ಮಳೆ ಆಗುತ್ತಿದ್ದು ಮತ್ತೆ ಮಹಾಪೂರ ಬಂದಿದೆ. ಹೋಸದಾಗಿ ಕಬ್ಬು ಹಾಗೂ ಇನ್ನಿತರ ವಾಣಿಜ್ಯ ಬೆಳೆಗಳು ಹಾನಿಯಾಗುವ ಸಂಭವವಿದೆ. ಶಿರದವಾಡ, ಶಮನೆವಾಡಿ, ಬೇಡಕಿಹಾಳ ಜನರಿಗೆ ಪಿಕ್ನಿಕ್ ಸ್ಥಳವಾದ ಫೂಲ್. ಪ್ರತಿದಿನ ಸಂಜೆ ಹೊತ್ತಿಗೆ ಜನರಿಂದ ತುಂಬಿ ತುಳುಕುತ್ತಿದೆ, ಎಲ್ಲರಿಗು ನೋಡಲು … Continue reading ಮತ್ತೆ ದೂಧಗಂಗಾ ನದಿಗೆ ಪ್ರವಾಹ