ದೂಧಗಂಗಾ ನದಿಗೆ ಪ್ರವಾಹ

ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ದೂಧಗಂಗಾ ನದಿ ತುಂಬಿ ಹರಿಯುತ್ತಿದ್ದು, ರೈತರ ಹೊಲಗಳಲ್ಲಿ ನೀರು ತುಂಬಿದೆ... ಹೋದ ವರುಷ ಬರಗಾಲದಿಂದ ತತ್ತರಿಸಿದ್ದ ರೈತ ಈಗ ಬಿದ್ದ ಮಳೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ. ಕಳೆದ ಸುಮಾರು10 ವರುಷಗಳಲ್ಲಿ ಇದೆ ಮೊದಲ ಬಾರಿಗೆ ಶಮನೆವಾಡಿ ಮತ್ತು ಬೇಡಕಿಹಾಳ ಹಳ್ಳಗಳು ಹರಿಯುತ್ತಿವೆ. ಶಿರದವಾಡ, ಶಮನೆವಾಡಿ, ಬೇಡಕಿಹಾಳ ಜನರಿಗೆ ಪಿಕ್ನಿಕ್ ಸ್ಥಳವಾದ ಫುಲ್. ಪ್ರತಿದಿನವೂ ಸಂಜೆ ಹೊತ್ತಿಗೆ ಜನರಿಂದ ತುಂಬಿ ತುಳುಕುತ್ತಿದೆ, ಎಲ್ಲರಿಗು ನೋಡಲು ಆನಂದ ಹರ್ಷ. ಬುಧವಾರದಿಂದ ಮಳೆ ಕಡಿಮೆ … Continue reading ದೂಧಗಂಗಾ ನದಿಗೆ ಪ್ರವಾಹ

ಸಿಇಟಿಯಲ್ಲಿ 352ನೇ ಶ್ರೇಣಿ ಪಡೆದ ಬೇಡಕಿಹಾಳದ ವಿಧ್ಯಾರ್ಥಿ

ಖಾಸಗಿ ಸಂಸ್ಥೆಯ ನೌಕರನ ಮಗನೋಬ್ಬ PUC ಪರೀಕ್ಷೆಯಲ್ಲಿ ಶೇ 97% ಅಂಕ ಪಡೆದುಕೊಂಡು ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ 352ನೇ ಸ್ಥಾನ ಗಳಿಸುವ ಮೂಲಕ ಉನ್ನತ ಸಾಧನೆ ಮಾಡಿದ್ದಾನೆ. ಹರ್ಷಲ ಮಾಳು ಕೋರೆ 1ನೇ ತರಗತಿಯಿಂದ 5ನೇ ತರಗತಿವರೆಗೆ ಬೇಡಕಿಹಾಳದ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿ, ಈ ವಿದ್ಯಾರ್ಥಿ 6ನೇ ತರಗತಿಗೆ ಸತ್ಯಸಾಯಿ ಲೋಕಸೇವಾ ಸಂಚಾಲಿತ ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ ತಾಲೂಕಿನ ಅಳಕೆಯಲ್ಲಿರುವ ಸತ್ಯಸಾಯಿ ಶಿಕ್ಷಣ ಸಂಸ್ಥೆ ಯವರು ನಡೆಸುವ ಪ್ರವೇಶ … Continue reading ಸಿಇಟಿಯಲ್ಲಿ 352ನೇ ಶ್ರೇಣಿ ಪಡೆದ ಬೇಡಕಿಹಾಳದ ವಿಧ್ಯಾರ್ಥಿ

B S Highschool Scored 87.53% Pass in SSLC

ಲಟ್ಟೆ ಶಿಕ್ಷಣ ಸಂಸ್ಥೆಯ B S ಪದವಿ ಪೂರ್ವ ಮಹಾವಿದ್ಯಾಲಯದ ಹೈಸ್ಕೂಲ ವಿಭಾಗದ 10ನೇ ತರಗತಿಯ ಪರೀಕ್ಷೆಯಲ್ಲಿ 87.53% ವಿದ್ಯಾರ್ಥಿಗಳು ತೇರ್ಗಡೆಯಾದರು. ಪರೀಕ್ಷೆಯಲ್ಲಿ ಒಟ್ಟು 191 ವಿದ್ಯಾರ್ಥಿಗಳು ಇದ್ದರು, ಅದರಲ್ಲಿ 150 ವಿದ್ಯಾರ್ಥಿಗಳು ತೇರ್ಗಡೆಯಾದರು. ಸಂಧ್ಯಾ ಶಿರೋಡಕರ್ 97.80% ಗಳಸಿ ವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದರು. ಶುಭಮ ಬಾಬಾಸಾಬ ಕುಮಟೊಳೆ 96.80% ದ್ವಿತೀಯ ಕ್ರಮಾಂಕ ಪ್ರಜ್ಞಾ ಅಜಿತ ಉಮ್ಮಾಜೆ 93.76% ಮೂರನೇ ಸ್ಥಾನ ಪಡೆದರು. ಪರೀಕ್ಷೆಯಲ್ಲಿ ವಿಶೇಷ ಶ್ರೇಣಿಯಲ್ಲಿ 28, ಪ್ರಥಮ ಶ್ರೇಣಿಯಲ್ಲಿ 80, ದ್ವಿತೀಯ ಶ್ರೇಣಿಯಲ್ಲಿ … Continue reading B S Highschool Scored 87.53% Pass in SSLC

Grow trees to save earth

ಮರ ಬೆಳಸಿ ಅಭಿಯಾನ - 40℃ ಬಿಸಿಲಿನ್ಯಾಗ್ ಸರ್ಕಲ್ದಿಂದ ಮನಿಗಿ ಹೋಗೋದು ಒಂದ್ ದೊಡ್ಡ ಗುಡ್ಡ ಹತ್ತಿದಂಗ್ ನೋಡರಿ!!! ಹೌದು ಇದು ಶಮನೇವಾಡಿ ಮತ್ತು ಬೇಡಕಿಹಾಳ ಜನರ ಗೋಳು! ಯಾಕೆಂದರೆ ಸರ್ಕಲ್ ನಿಂದ ಯಾವ ಕಡೆ ಹೋದರು ಒಂದು ಮರ ಅಥವಾ ಮರದ ನೆರಳು ಕೂಡ ಸಿಗೋದಿಲ್ಲ! ಕೆಲವು ವರ್ಷಗಳ ಹಿಂದೆ ಶಮನೇವಾಡಿ ದಾರಿಯಲ್ಲಿ ಘುಳನ್ನವರ್ ಹೊಲದಲ್ಲಿ ಮಾವಿನ ಮರಗಳು ಇದ್ದವು, ಈಗ ಅವುಗಳನ್ನು ಕಡಿದು ಹಾಕಿದ್ದಾರೆ. ನಮ್ಮ ಗ್ರಾಮ ಪಂಚಾಯತ್ ನವರು ರಸ್ತೆಯ ಎರಡು ಬದಿಗೆ … Continue reading Grow trees to save earth

ಆಭರಣ ವ್ಯಾಪಾರಿಗಳ ಸಂಘ ಅಸ್ಥಿತ್ವಕ್ಕೆ

ಬೇಡಕಿಹಾಳ ಪರಸರ ಆಭರಣ ವ್ಯಾಪಾರಿಗಳ ಸಂಘ ಅಸ್ಥಿತ್ವಕ್ಕೆ ಬಂದಿತು. ಅಧ್ಯಕ್ಷರಾಗಿ ಬೇಡಕಿಹಾಳದ ಸುನಿಲ ಪೂೕತದಾರ ಆಯ್ಕೆಯಾದರು, ಉಪಾಧ್ಯಕ್ಷರಾಗಿ ಶಮನೇವಾಡಿಯ ಪ್ರವೀಣ ಅಣ್ಣಾಸೊ ಖೋತ ಸವಾ೯ನು ಮತದಿಂದ ಆಯ್ಕೆಯಾದರು. ಹಿರಿಯ ಆಭರಣಕಾರ ಕಮಲಾಕರ ಪೋತದಾರ ಉಪಸ್ಥಿತ ಇದ್ದರು, ಬಾಳಾಸಾಹೇಬ ಪಾಟೀಲ ಸ್ವಾಗತಿಸಿದರು. ಖಡಕಲಾಟದ ರಾಜೇoದ್ರ ಪೂೕತದಾರ ಸಚಿವರಾಗಿ ಆಯ್ಕೆ, ಸಂಚಾಲಕರಾಗಿ ಗಳತಗಾದ ಸುರೇಶ ಖೋತ, ಶಿರಗಾಂವದ ಉದ್ಧವ ಪೂೕತದಾರ, ಶಮನೇವಾಡಿಯ ಸಂಜಯ ಕೋಳೆಕರ, ಪ್ರಥ್ವಿರಾಜ್ ಪೂೕತದಾರ - ನೇಜ, ಖಡಕಲಾಟದ ಸಂತೋಷ್ ಪಾಟೀಲ್, ಧನಾಜಿ ಚವ್ಹಾಣ ಅಕ್ಕೋಳ, ಬಾಳಾಸಾಹೇಬ … Continue reading ಆಭರಣ ವ್ಯಾಪಾರಿಗಳ ಸಂಘ ಅಸ್ಥಿತ್ವಕ್ಕೆ

ನೇಜ ಜಿ. ಪಂ. ಅಭ್ಯರ್ಥಿಗಳು

ಕಾಂಗ್ರೆಸನಿಂದ ಶಮನೇವಾಡಿಯ ಶ್ರೀ ಸುದರ್ಶನ ಖೋತ ಇವರನ್ನು ಸಂಸದ ಪ್ರಕಾಶ ಹುಕ್ಕೇರಿ ಯವರು ದಿನಾಂಕ 25 ರಂದು ಅಧಿಕೃತವಾಗಿ ಘೋಷಣೆ ಮಾಡಿದರು.

ತಾ.ಪಂ. ಜಿ.ಪಂ. ಚುನಾವಣೆ 2016

ಚಿಕ್ಕೋಡಿ ತಾಲ್ಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 46 ಸ್ಥಾನಗಳಲ್ಲಿ 23 ಪುರುಷರಿಗೆ ಮತ್ತು 23 ಮಹಿಳೆಯರಿಗೆ ಮೀಸಲು. ಬೇಡಕಿಹಾಳ ತಾ. ಪಂ. - ಹಿಂದುಳಿದ (ಅ) ವರ್ಗ ಶಮನೇವಾಡಿ (ಶಿರದವಾಡ, ಜನವಾಡ) ತಾ. ಪಂ. - ಹಿಂದುಳಿದ (ಅ) ವರ್ಗ ನೇಜ ತಾ. ಪಂ. - ಸಾಮಾನ್ಯ ನೇಜ ಜಿ. ಪಂ. - ಸಾಮಾನ್ಯ ಜಿಲ್ಲಾ ಅಧಿಕಾರಿಗಳು 25 ರಂದು ಅಧಿಸೂಚನೆ ಹೊರಡಿಸಿದರು. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಫೆ. 01, ಪರಿಶೀಲನೆ ಫೆ. 02, ಉಮೆದುವಾರಿಕೆ … Continue reading ತಾ.ಪಂ. ಜಿ.ಪಂ. ಚುನಾವಣೆ 2016

KMACನಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮ

ಕುಸುಮಾವತಿ ಮಿರ್ಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮತ್ತು ಗಾಂಧಿ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮವನ್ನು ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸದಲಗಾ ಪಿ. ಎಸ್. ಐ. ಸಂಗಮ ಹೊಸಮನಿ ಅವರು ಮಾತನಾಡಿ - ಇಂದು ಯುವಕರು ಸಂಚಾರ ನಿಯಮದ ಬಗ್ಗೆ ನಿರ್ಲಕ್ಷ್ಯ ತೋರುಸುತ್ತಿರುವದರಿಂದಾಗಿ ಜೀವ ಹಾನಿ ಸಂಭವಿಸಿ ಕುಟುಂಬಗಳು ತೊಂದರೆ ಅನುಭವಿಸುತ್ತಿದ್ದಾರೆ. ಕುಡಿದ ಅಮಲಿನಲ್ಲಿ ವಾಹನ ಚಲಿಸುವರ ಸಂಖ್ಯೆ ಹೆಚ್ಚಾಗಿದೆ, ನಿಯಮ ಗೊತ್ತಿದ್ದರೂ ಗಾಳಿಗೆ ತೂರಿ ನಿಯಮ … Continue reading KMACನಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮ

ಬೇಡಕಿಹಾಳ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರ?

ಸುಭಾಷ ಯಾದವ ಅವರ ಉಪವಾಸ ಸತ್ಯಾಗ್ರಹ! ಈಗಸ್ಟೆ ಬೇಡಕಿಹಾಳ ಗ್ರಾಮ ಪಂಚಾಯತಿ ಚುನಾವಣೆ ಆಗಿ ಹೊಸ ಆಡಳಿತ ಮಂಡಳಿ ಜಾರಿಗೆ ಬಂದಿದೆ, ಆದೆರೆ ಸುಭಾಷ ಯಾದವ ಅವರ ಪ್ರಕಾರ ಗ್ರಾಮ ಪಂಚಾಯತಿ ಭ್ರಷ್ಟಾಚಾರದಲ್ಲಿ ಮುಳಿಗಿದೆ. ಅಪಾದನೆಗಳು: ರೇಷನ ಕಾರ್ಡ್ ಮಾಹಿತಿ ಸರಿ ಪಡಿಸಲು ೧೦೦ ರೂಪಾಯಿ ಆಧಾರ ಕಾರ್ಡ ಮಾಡಿಸಲು ೧೦೦ ರಿಂದ ೧೫೦ ರೂಪಾಯಿ ಸರ್ಕಾರಿ ಮನೆ ಪಡೆಯಲು ೮೦೦ ರಿಂದ ೧೦೦೦ ರೂಪಾಯಿ ಭಾಗ್ಯಲಕ್ಷ್ಮಿ ಯೋಜನೆಗೆ ೫೦೦ ರೂಪಾಯಿ ಪಾರದರ್ಶಕ ಆಡಳಿತ: ಗ್ರಾಮ ಪಂಚಾಯತಿಯ … Continue reading ಬೇಡಕಿಹಾಳ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರ?

ಬೇಡಕಿಹಾಳ ಮತ್ತು ಶಮನೇವಾಡಿಯಲ್ಲಿ ವಿಜೃಂಭಣೆಯ ದೀಪಾವಳಿ

ಬೇಡಕಿಹಾಳ ಮತ್ತು ಶಮನೇವಾಡಿಯಲ್ಲಿ ವಿಜೃಂಭಣೆಯ ದೀಪಾವಳಿ ಜರುಗಿತು. ಆದರೆ ಎಂದಿನಂತೆ ಶಮನೇವಾಡಿಯ ದೀಪಾವಳಿ ಸಡಗರ ಸಂಭ್ರಮದಿಂದ ಜರುಗಿತು. ಶಮನೇವಾಡಿ: ನರಕ ಚತುರ್ದಶಿ ದಿನ ಶ್ರೀ ಮಹಾವೀರ ಭಗವಾನರ ಪಲ್ಲಕ್ಕಿಯಲ್ಲಿ ಮೆರವಣಿಗೆ, ಅಮಾವಾಸ್ಯೆ ದಿನ ಮುಂಜಾನೆ ಶಮನೇವಾಡಿಯ ಜಿನ ಮಂದಿರದಲ್ಲಿ ಭಗವಾನ ಮಹಾವೀರರ ನಿರ್ವಾಣ ಮಹೋತ್ಸವವನ್ನು ಆಚರಿಸಿದರು. ಸಂಜೆಯ ವೇಳೆ ಪಟಾಕಿ ಸಿಡಿಸಿ ಮನೆಗಳಲ್ಲಿ ಲಕ್ಷ್ಮಿ ಪೂಜೆ ಮಾಡಿದರು, ಇನ್ನು ಕೆಲವರು ಪಾಡ್ಯ ದಿನಾ ಲಕ್ಷ್ಮಿ ಪೂಜೆ ಮಾಡಿದರು. ಸಂಜೆ ಸುಮಾರು 4 ಘಂಟೆಗೆ ಶಮನೇವಾಡಿಯ ರಾಮಲಿಂಗೇಶ್ವರ ಮತ್ತು … Continue reading ಬೇಡಕಿಹಾಳ ಮತ್ತು ಶಮನೇವಾಡಿಯಲ್ಲಿ ವಿಜೃಂಭಣೆಯ ದೀಪಾವಳಿ