janawad-river-soilಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳ ಪಾತ್ರದಲ್ಲಿ ಮರಳು ತೇಗೆಯಬಾರದು ಎಂದು ಜಿಲ್ಲಾಧಿಕಾರಿಯವರ ಆದೇಶವಿದ್ದರು ಶಮನೇವಾಡಿ ಮತ್ತು ಜನವಾಡ ಭಾಗಗಳಲ್ಲಿ ಮರಳು ತೆಗೆಯುವ ಕೆಲಸ ನಿರಾಳವಾಗಿ ಸಾಗಿದೆ.

ಕಾನೂನುಬಾಹಿರ ಮರಳು ತೆಗೆಯುವ ಕೆಲಸವನ್ನು ಜನವಾಡ ಗ್ರಾಮಸ್ಥರು ಒಟ್ಟಿಗೆ ಸೇರಿ ಮುತ್ತಿಗೆ ಹಾಕಿದರು. ಹಾಲಸುಗರ ನಿರ್ದೇಶಕ ರಾಮಗೊಂಡ ಪಾಟೀಲ್, ಕೃಷಿ ಬ್ಯಾಂಕ್ ಅಧ್ಯಕ್ಷ ಉದಯಕುಮಾರ ಪಾಟೀಲ್, ಗ್ರಾಂ. ಪ . ಅಧ್ಯಕ್ಷ ಆನಂದ ಮೋಕಾಶಿ, ಜಿರ್ನೋದ್ಧಾರ ಸಮಿತಿಯ ಅಧ್ಯಕ್ಷ ಪಿರಗೊಂಡಾ ಮಗದುಮ್ ರೈತರ ನಾಯಕತ್ವದಲ್ಲಿ ಶಮನೇವಾಡಿ ಹದ್ದಿನಲ್ಲಿ ಇರುವ ಅಕ್ರಮ ಮರಳು ತೆಗೆಯುವ ಸ್ಥಳಕ್ಕೆ ಮುತ್ತಿಗೆ ಹಾಕಿದರು.

ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಮರಳು ಧಂಧೆಯನ್ನು ನಿಷೇಧಿಸಿದ್ದರೂ ದೂಧಗಂಗಾ ನದಿ ಪಾತ್ರದಲ್ಲಿ ಮಾತ್ರ ಕಾನೂನುಬಾಹಿರ ಮರಳು ತೆಗೆಯುವ ಕೆಲಸ ಬಹಿರಂಗವಾಗಿ ಸಾಗಿದೆ. ಬೋಟಗಳ ಸಹಾಯದಿಂದ ಸುಮಾರು ೪೦೦ft ಪೈಪ್ ಜೋಡಿಸಿ ಶಮನೇವಾಡಿ ಹದ್ದಿನಲ್ಲಿ ಬೋಟ ಬಿಟ್ಟು ಜನವಾಡ ಹದ್ದಿನಲ್ಲಿ ಮರಳು ತೆಗೆಯುತ್ತಿದ್ದಾರೆ. ಇದರಿಂದ ಜನವಾಡ ಹದ್ದಿನಲ್ಲಿರುವ ಹೊಲಗಳಿಗೆ ಹಾನಿ ಆಗುತ್ತಿದೆ ಎಂದು ಬಿಂಗು ಮಧಾಳೆ ಹೇಳಿದರು.

ಆರೋಗ್ಯಕ್ಕೆ ಕುತ್ತು: ಪಂಪ್ ಸೆಟ್ ಬಳಸುವದರಿಂದ ನೀರಿನಲ್ಲಿ ಎಣ್ಣೆ ಮಿಶ್ರಣ ಆಗುತ್ತಿದೆ ಇದರಿಂದ ಕುಡಿಯುವ ನೀರಿಗೂ ಬರೆ ಬಂದಾಗಿದೆ, ಕೆಲವರಿಗೆ ಕಾಲರಾ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ತಹಸಿಲ್ದಾರ್ ಮತ್ತು ಪೋಲಿಸ್ ರಿಗೆ ದೂರು ಸಲ್ಲಿಸುವುದಾಗಿ ಗ್ರಾಂ ಪಂ ಅಧ್ಯಕ್ಷ ಹೇಳಿದರು.

Leave a comment