2011 in review

The WordPress.com stats helper monkeys prepared a 2011 annual report for this blog.

Here’s an excerpt:

A New York City subway train holds 1,200 people. This blog was viewed about 3,800 times in 2011. If it were a NYC subway train, it would take about 3 trips to carry that many people.

Click here to see the complete report.

ಕರ್ತವ್ಯ ಫೌಂಡೇಶನ್ ವತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ

ಬೇಡಕಿಹಾಳ ಗ್ರಾಮದಲ್ಲಿ ಕರ್ತವ್ಯ ಫೌಂಡೇಶನ್ ವತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ ಶಿಬಿರವನ್ನು ಏರ್ಪಡಿಸಿದ್ದರು.

ಬೇಡಕಿಹಾಳ, ಶಮನೇ ವಾಡಿ, ಬೋರಗಾಂವ, ಚಾಂದ ಶಿರದವಾಡ, ಕಾರದಗಾ, ಭೋಜ, ಗಳತಗಾ, ಅಕ್ಕೌಳ ಮತ್ತು ನೇಜ ಗ್ರಾಮದ 210 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಜಿ.ಪಂ. ಸದಸ್ಯೆ ಸುಜಾತಾ ಖೋತ ಶಿಬಿರವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಗ್ರಾ.ಪಂ. ಅಧ್ಯಕ್ಷ ಶಂಕರ ದಾದಾ ಪಾಟೀಲ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪ್ರೊ. ಸುಧಾಕರಇಂಡಿ, ಎಸ್.ಟಿ. ಲಗಾರೆ, ಡಿ.ಎಂ. ತಹಶೀಲ್ದಾರ, ಜ್ಯೌತಿಬಾ ಪಾಟೀಲ, ಸುಧಾಕರ ಸೋನಾಳಕರ, ಶಿವಾಜಿ ಮ್ಹಾರೆ, ಪ್ರಕಾಶ ಮಾಳಿ ಮುಂತಾದವರು ಪರೀಕ್ಷಾ ಪೂರ್ವ ತಯಾರಿ ಕುರಿತು ಮಾರ್ಗದರ್ಶನ ಮಾಡಿದರು.

ಸಚೀನ ಪಾಟೀಲ, ಅರ್ಚನಾ ದೇಸಾಯಿ, ತಾತ್ಯಾಸಾಬ ಖೋತ, ಎ.ವಿ. ಮಾಲಗಾಂವೆ, ಸಂಜಯ ದೇಸಾಯಿ, ಸಿದ್ದೇಶ್ವರ ಮಾನೆ, ಸಾಗರ ಕೇಸರಕರ, ವಿಶಾಲ ಬಾಬರ, ಕಿರಣ ಪಾಂಗೇರಿ ಮೋಹನ ಸುಖಸಾರೆ, ಎಸ್.ಕೆ. ಸಂಕಪಾಳೆ, ಅನಿಲ ಬಾಕಳೆ, ಪ್ರಶಾಂತ ದೇಸಾಯಿ, ರವೀಂದ್ರ ಜನವಾಡ, ಸಚಿನ ಶೀಳಕೆ, ಹನುಮಂತ ಜಾಧವ ಮುಂತಾದವರಿದ್ದರು. ಅನಂತ ಮೋರೆ ಸ್ವಾಗತಿಸಿದರು

265 ತಳಿಯ ಕಬ್ಬು ಕಟಾವು ಮಾಡಲು ಗಡಿ ಭಾಗದ ಸಕ್ಕರೆ ಕಾರ್ಖಾನೆಗಳು ಹಿಂದೇಟು

ಕಬ್ಬು ನುರಿಸುವ ಹಂಗಾಮು ಕಳೆದ ಒಂದು ತಿಂಗಳಿನಿಂದ ಪ್ರಾರಂಭ ಮಾಡಿದ್ದು ಗಡಿ ಭಾಗದ ಕಬ್ಬು ಕಟಾವು ಚುರುಕುಗೊಂಡಿದ್ದು, ಈ ಹಂಗಾವಮಿನಲ್ಲಿ ಸಿಓ 265 ತಳಿಯ ಕಬ್ಬು ಕಟಾವು ಮಾಡಲು ಗಡಿ ಭಾಗದ ಸಕ್ಕರೆ ಕಾರ್ಖಾನೆಗಳು ಹಿಂದೇಟು ಹಾಕುತ್ತಿದ್ದರಿಂದ ಕಬ್ಬು ಉತ್ಪಾದಕರಲ್ಲಿ ಆತಂಕ ಮೂಡಿಸಿದೆ.

265 ತಳಿಯ ಕಬ್ಬು ಸರಿಯಾದ ವೇಳೆಯಲ್ಲಿ ಕಟಾವು ಆಗದೇ ಹೋದಲ್ಲಿ ಕಬ್ಬಿಗೆ ತುರಾಯಿ ಬಂದು ಬೆಂಡು ಒಡೆದು ತೂಕದಲ್ಲಿ ಇಳಿಮುಖವಾಗುತ್ತದೆ. ಸರಿಯಾದ ಸಮಯಕ್ಕೆ ಕಬ್ಬು ಕಟಾವು ಮಾಡದೇ ಉದ್ದಲ್ಲಿ ರೈತರು ಹಾನಿ ಅನುಭವಿಸಬೇಕಾಗುತ್ತದೆ ಎಂಬುದನ್ನು 260 ತಳಿಯ ಕಬ್ಬು ಉತ್ಪಾದಕರು ತಿಳಿಸಿದ್ದಾರೆ.

ಈ ಬಾರಿ ಮಳೆಯ ಅಭಾವದಿಂದ ಉತ್ಪಾದನೆ ಕುಂಠಿತಗೊಂಡಿದೆ. ಆದರೂ ವಿಳಂಬ ಮಾಡುತ್ತಿರುವದು ಯಾವ ನ್ಯಾಯ ಎಂದು ರೈತರ ಪ್ರಶ್ನೆಯಾಗಿದೆ. ರೈತರ ಬಾಳು ಹಸನಾಗಬೇಕಾದಲ್ಲಿ ಕಾರಕಾಣೆಗಳು 265 ತಳಿ ಕಬ್ಬನ್ನು ಶೀಘ್ರ ಕಟಾವು ಮಾಡಲು ಮುಂದಾಗಬೇಕಾಗಿದೆ.

ಅಂಗನವಾಡಿ ಶಿಕ್ಷಕರ ನೇಮಕಕ್ಕೆ ಆಗ್ರಹ

ಸಮೀಪದ ಚಾಂದಶಿರವಾಡ ಗ್ರಾಮದಲ್ಲಿಯ ಬೀರೂಬಾಯಿ ಮಂದಿರದ ಹತ್ತಿರವಿದ್ದ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಶಿಕ್ಷಕುಯರನ್ನು ನೇಮಕ ಮಾಡಬೇಕೆಂದು ಗ್ರಾಮಸ್ಥರ ಆಗ್ರಹವಾಗಿದೆ.

ಕಳೆದ 16 ತಿಂಗಳಿಂದ ಈ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಿಲ್ಲ. ಇದರಿಂದ ಮಕ್ಕಳಿಗೆ ತುಂಬಾ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ. ಒಟ್ಟು ಗ್ರಾಮದಲ್ಲಿ 3 ಅಂಗನವಾಡಿ ಕೇಂದ್ರಗಳಿದ್ದು ಇವುಗಳಲ್ಲಿ ಒಂದು ಅಂಗನವಾಡಿ ಕೇಂದ್ರದ ಶಿಕ್ಷಕಿ ರಾಜೀನಾಮೆ ನೀಡಿರುತ್ತಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಬೀರದೇವ ಮಂದಿರದ ಹತ್ತಿರ ಅಂಗನವಾಡಿ ಕೇಂದ್ರದಲ್ಲಿ 30 ಮಕ್ಕಳು ಕಲಿಯುತ್ತಿದ್ದು, ಈ ಕುರಿತು ಮೂರ್ನಾಲ್ಕು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಶೀಘ್ರವೇ ನೇಮಕ ಮಾಡದೇ ಹೋದಲ್ಲಿ ಶಿರವಾಡ ಗ್ರಾಮದ ರಸ್ತೆ ತಡೆ ಮಾಡುವದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಸರಣಿ ಸತ್ಯಾಗ್ರಹ ಹಿಂದಕ್ಕೆ

ಬಿ.ಎಸ್. ಪ್ರೌಢ ಶಾಲೆಯ ದಲಿತ ವಿದ್ಯಾರ್ಥಿನಿ ಪೂಜಾ ಪಾವನೆ ಎಂಬುವಳಿಗೆ ಆಗಿರುವ ಶೈಕ್ಷಣಿಕ ಹಾನಿ ಕುರಿತು ಶಾಲೆಯ ಎದುರು ದಿ. 8 ರಿಂದ ನಡೆಸುತ್ತಿದ್ದ ಪೀಪಲ್ಸ್ ಪಾರ್ಟಿ ಮತ್ತು ದಲಿತ ಸಂಘರ್ಷ ಸಮಿತಿಯವರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಹಿಂದಕ್ಕೆ ಪಡೆದರು.
ವಿಕ್ರಮ ಶಿಂಗಾಡೆಯವರ ಮುಂದಾಳತ್ವದಲ್ಲಿ ಸರಣಿ ಉಪವಾಸ ಕೈಗೊಳ್ಳಲಾಗಿತ್ತು. ಉಪ ಪ್ರಾಚಾರ್ಯ ಡಿ.ವಿ. ಮಾನೆ ಮತ್ತು ಶಿಕ್ಷಕ ಎ.ಡಿ. ರಾಣೆಯವರ ಪದೋನ್ನತಿ ಸ್ಥಗಿತಗೊಳಿಸುವಂತೆ ಶಿಕ್ಷಣ ಸಂಸ್ಥೆಯ ಮೇಲೆ ಒತ್ತಾಯಿಸಿದ್ದರು. ಸಂಸ್ಥೆಯವರು ಪದೋನ್ನತಿ ಸ್ಥಗಿತಗೊಳಿಸಿದ ಪತ್ರ ಪ್ರತಿಭಟನಾಕಾರರಿಗೆ ನೀಡಿರುವದರಿಂದ ಸತ್ಯಾಗ್ರಹ ಹಿಂದಕ್ಕೆ ಪಡೆದರು. ತಹಶೀಲ್ದಾರ ರಮೇಶ ದೇಸಾಯಿ, ಸಿಪಿಐ. ವೇಣುಗೋಪಾಲ ಮತ್ತು ಪಿ.ಎಸ್.ಐ. ರಾಘವೇಂದ್ರ ಹಳ್ಳೂರ ಅವರು ಸತ್ಯಾಗ್ರಹದಲ್ಲಿ ಪಾಲ್ಗೊಂಡ ದಲಿತ ಮುಖಂಡರ ಜೊತೆಗೆ ಚರ್ಚೆ ನಡೆಸು ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.
ವಿದ್ಯಾಧರ ಕಾಂಬಳೆ, ಶಿವಾನಂದ ಭೋಗಲೆ, ಶ್ರೀಕಾಂತ ತಳವಾರ, ಪ್ರಶಾಂತ ಜಾಧವ, ಅಮೋಲ ಜಾಧವ, ನೀತಾ ಮಾಳಗೆ, ಮತ್ತು ರೇಖಾ ಕಾಂಬಳೆ, ಸುದರ್ಶನ ಖೋತ, ಇಂದ್ರಜೀತ ಪಾಟೀಲ, ಬಾಗಣ್ಣಾ ಖೋತ, ಎಸ್.ಟಿ. ಖೋತ, ಪ್ರಶಾಂತ ಪಾಟೀಲ, ತಾತ್ಯಾಸಾಬ ಖೋತ ಮುಂತಾದವರಿದ್ದರು.

ಪಡಿತರ ಚೀಟಿ ಅಂಕಿ-ಅಂಶ : ಶಮನೇವಾಡಿ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವರದಿಯ ಪ್ರಕಾರ ಶಮನೇವಾಡಿಯಲ್ಲಿ ಒಟ್ಟು ಹೊಂದಿಸಿದ ಪಡಿತರ ಚಿಟೀ ಸಂಖ್ಯೆ 2151 ಕುಟುಂಬಗಳು

ತೆರಿಗೆ ಇಲ್ಲದ ಮನೆಯಲ್ಲಿ ವಾಸಿಸಿದ್ದು ಪಡಿತರ ಚೀಟಿ ಹೊಂದಿರುವವರ ಸಂಖ್ಯೆ 157 ಕುಟುಂಬಗಳು

ರೇಷನ್ ಕಾರ್ಡ್ ಇದೆ, ಕುಟುಂಬ ಇಲ್ಲ - 42 ಕುಟುಂಬಗಳು

ಕುಟುಂಬ ಇದೆ, ರೇಷನ್ ಕಾರ್ಡ್ ಇಲ್ಲ – 2 ಕುಟುಂಬಗಳು

Farmers Training Programme

Dharwad Agri University organized 7 days Farmers Training Programme Under Project “Scaling Up of Water Productivity in Agriculture for Livelihoods” in Yuvacharya Shri Gunadhranandi Bhavan in association with Jai Kisan Prathmik Krishi Pathina Sahakari Bank Ltd. Shamanewadi and Padmavati Minority Multipurpose Society of Shamanewadi. Training inaugurated on Monday, Dr. A. G. Khot gave advise about varieties of agri plants and produces. Dr. Ashok P. suggested how to implement drip irrigation by utilizing less water along with saving time.
On 20th Sept 2011 Dr.Vilas spoke about how to protect and use ground water and plan accordingly to utilize the same.

On 21st Sept. 2011, Dr. P. Ramagonda suggested about the societies or groups water schemes, and on same day Dr. Shirke told about rain water harvesting system.
on 22 Sept 2011 Dr. Rajkumar spoke about irrigated and non-irrigated lands and doing soil examination every year, growing the crops. Dr. Sanjay spoke about Sugar Cane growing and maintaining. Dr. Kudache of Borgaon have showcased his Bananas from his farm.

ಮುಂದು‍ವರೆದ ಮಳೆರಾಯನ ಆರ್ಭಟ

ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಅಬ್ಬರ ಇಂದೂ ಸಹ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಹಾರಾಷ್ಟ್ರದಲ್ಲಿ ಕೂಡ ತೀವ್ರ ಮಳೆಯಾಗುತ್ತಿರುವ ಕಾರಣ ರಾಜಾಪೂರ ಬ್ಯಾರೇಜನಿಂದ ೧.೧೮ ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗಿದ್ದು, ಅದು ಕರ್ನಾಟಕಕ್ಕೆ ಹರಿದುಬರುತ್ತಿದೆ. ಕೊಯ್ನಾ ಆಣೆಕಟ್ಟಿನಿಂದ ೧.೧೦ ಲಕ್ಷ ಕ್ಯೂಸೆಕ್ಸ್ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ.

Doodhaganga

ದೂಧಗಂಗಾ ಮತ್ತು ವೇದಗಂಗಾ ನದಿಗಳ ನೀರು ಕೃಷಿ ಭೂಮಿಗೆ ನುಗ್ಗಿದ್ದು, ಬೆಳೆಗಳು ಜಲಾವೃತವಾಗಿ, ಕೊಳೆಯುತ್ತಿವೆ. ನದಿಯ ದಡದಲ್ಲಿನ ಎಲ್ಲ ಪಂಪ ಸೆಟ್ ಗಳನ್ನೂ ಮೇಲೆತ್ತಲಾಗಿದ್ದು ಕೆಲವಂದು ನೀರಿನಲ್ಲಿ ಮುಳಿಗಿವೆ. ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ತೀರಪ್ರದೇಶದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ….

CRC Sports Inaugurated in BS High School

Galataga division CRC high school level sports inaugurated here in BS High School by Mr. Ashok Nare. BS high school student Nikhil Pangire brought the sports torch and Mr. Sudarshan Khot lighted the torch, PE teacher Mr. A V Malagatti gave oath to all participants.
Shamanewadi’s GP President and members were also present along with ZP memeber Sujata Khot, TP member Kavita Desai, Lakshmibai Patil, and Nodal sports officer A P Magdum.
Mr. D. A Mane principal welcomed all representatives. From 13 high school 250 students are participating.

HESCOM Swiched Off Street Lights

Just a year back they started illuminating from Shamanewadi bus stand to Bedkihal bus stand and HESCOM unplugged the connection, now there is complete darkness on this road! All credit goes to contractor who plugged them to electricity polls without permission, this seems fine but when Shamanewadi and Bedkihal Panchayat’s got bills they don’t have money to pay them back! So much poor twin villages. Recently they increased House and Water tax to pay these new street lights bills but all went in vain – says Mr. Raju Khot. He also demanded to transfer Shamanewadi CDO as he is not up-to mark and not doing any developments, he also blamed on current governing body.
They invested huge money to bring up these street lights but after a year they went off – this is the development, where are newly elected TP and ZP members? What they are doing? are they really concerned about development? Questions will be more but no one is there to answer!!!